Monday, May 26, 2008

ಆತ್ಮ

ಬಿಳಿ ಹಾಲು
ಝರಿ ನೀರು
ಗಿಳಿ ಹಸಿರು
ಶುಭ್ರಕ್ಕೆ ಮತ್ತೊಂದಿಲ್ಲ
ನಮ್ಮ "ಮನಸ್ಯಾ"ಕೆ ಹೀಗಲ್ಲ?
ನಂಗೂ ಗೊತ್ತಿಲ್ಲ.

ಹುಳಿ ಮಾವು
ಸಿಹಿ ಜೇನು
ಬಿಸಿ ತುಪ್ಪ
ಮಗೆ-ಮಗೆದು ತಿಂಬ "ದೇಹ"ಕ್ಕೆ
ಹಸಿದವರು ಯಾಕೆ ಕಾಣಲ್ಲ?
ಇದರ ನಡೆ
ಒಂಚೂರು ನಂಗೆ ರುಚಿಸಲ್ಲ.

ಬಾನ ಸೂರ್ಯ
ಬಿಸೋ ಗಾಳಿ
ಹೊತ್ತಿರುವ ಈ ಭೂಮಿ
ತಮಗ೦ತ ಏನ ಕೂಡಲ್ಲ.
"ಬುದ್ದಿ" ಏನು ಕಲಿಯಿತೋ ಎಂಥೋ
ತನ್ ಕೆಲಸ ಬಿಟ್ರೆ
ಅದಕೆಂತ ಕಾಣಲ್ಲ.
ಬರೀ "ಅಹ೦"ದೊಳಗೆ ಮುಳುಗಿದೆಯಲ್ಲ.

ಎತ್ತರದ ಆ ಗುಡ್ಡ
ದಟ್ಟನೆಯ ಈ ಕಾಡು
ಸುತ್ತಿರುವ ನೀರ್ಮೋಡ
ತ೦ಪೊ೦ದೆ ಸೆಳೆದು ತರುವ೦ತೆ
"ಆಲೋಚನೆ"ಗಳ್ಯಾಕೆ ಏನೂ ಮಾಡಲ್ಲ?
ಪರರ ಜರಿವದ ಬಿಟ್ಟು
ಬೇರೆಂತು ಅವಕೆ ಬೇಕಿಲ್ಲ.

ಹಸಿ ಸುಳ್ಳು
ಬರೀ ಪಾಪ
ಮನಸೊಳಗೆ ಇಣುಕಿದರೆ
ಕಶ್ಮಲವೇ ಎಲ್ಲಾ...
ಯಾರ ತಪ್ಪೋ -
ನನಗ್ಯಾಕೆ ಶಿಕ್ಷೆಯೋ?
ಈ ಮರು-ಹುಟ್ಟು, ಮುಕ್ತಿ
ಇನ್ಯಾರಿಗೋ??
ನನಗ೦ತು ಒಂದೂ ಬೇಕಿಲ್ಲ.

5 comments:

Unknown said...

ನಿಮ್ಮ ಕವಿತಯನ್ನು ಓದಿ
ನನ್ನಗೆ ಏನು ಕಾಮೆಂಟ್ಸ್ ಬರಿಯಬೇಕೆಂದು ಗೊತ್ತಾಗ್ತಿಲ್ಲ :-)

This poem I read liltle faster than other 2 poems becasue you have used simple kannada words.:-)
Simple but conveys strongs msg.

Very nice poem. Keep it up!!!!

ತೇಜಸ್ವಿನಿ ಹೆಗಡೆ said...

ಆತ್ಮಾವಲೋಕನ ತುಂಬಾ ಚೆನ್ನಾಗಿದೆ.

ಈ ಮರು-ಹುಟ್ಟು, ಮುಕ್ತಿ
ಇನ್ಯಾರಿಗೋ??
ನನಗ೦ತು ಒಂದೂ ಬೇಕಿಲ್ಲ.

ಸಾಲುಗಳು ಇಷ್ಟವಾದವು.

Yogesh Bhat said...

Shwetha, ನನ್ನ intention ಕೂಡ ಹಾಗೆ ಇತ್ತು. ತುಂಬಾ ಥ್ಯಾಂಕ್ಸ್. :)

ಹೆಗ್ದೆಯವರೇ ದನ್ಯವಾದಗಳು :).
ಪುನರ್ಜನ್ಮದ concept "ಆತ್ಮ" ಕ್ಕೆ ಹಿಡಿಸುವ೦ತದ್ದಲ್ಲ ಅನ್ನೋ ಹಾಗೆ ಬರೆಯಕ್ಕೆ ಪ್ರಯತ್ನಿಸಿದ್ದೆ. ಕೊನೆಯ ಪ್ಯಾರಾ ಇನ್ನೂ strong ಇರಬೇಕಿತ್ತು ಅನ್ಸುತ್ತೆ ಅಲ್ವಾ?

Unknown said...

Channagide. +ve agi idre innu channa......Nanagella bekalla!!!

Shwetha Mallelwar said...

Long time no poems..??
Each time I visit your blog I think you might have added new poem to the list.But this is disappointing.