Thursday, May 1, 2008

ಜಾತಿ ಮೀನು

ಮೆಲ್ಲನೆ ಹರಿವ ನೀರು
ಅಲ್ಲೊಂದು ಬಿಳಿ ಮೀನು
ಜೊತೆಗೊಂದು ಕರಿ ಮೀನು
ಬಿಳಿ ಮೀನ್ಗಳಾಟ ಎಲ್ಲರಿಗೂ ಚಂದ
ನನ್ನ್ ಕಣ್ಣ ಸೆಳೆದದ್ದು ಕರಿ ಮೀನಿನ೦ದ

ಕಲ್ಹತ್ತಿ ಇಳಿವಾಗ, ಗಿಡಸುತ್ತಿ ಬರುವಾಗ
ಒತ್ತೊತ್ತಿ ಈಜುವುವು ನವ ಜೋಡಿಯಂತೆ
ಹಗಲೆಲ್ಲ ಅಡುವುವು, ಮುಸ್ಸಂಜೆ ಹರಡುವುವು
ಇಡೀ ಇರುಳ ಕಳೆಯುವುವು ಬೆಳಗಿನ೦ತೆ
ಬಿಳಿ ಮೀನಿಗ೦ತು ಕರಿ ಮೀನಿನದೇ ಚಿ೦ತೆ - ನನ್ನ೦ತೆ

ಹಗಲಿರುಳು ಮೈಮರೆತು ಎಡೆಬಿಡದೆ ಕಲೆತಿರುವ
ಈ ಪ್ರೇಮಿಗಳ ಬಿಳಿ ಮೀನ ಗು೦ಪೊ೦ದು ಸುತ್ತುವರೆದಿತ್ತು,
ಮು೦ದಾಗುವ ಅವಘದವ ನೆನೆದು ನನ್ಮನವು ನಡುಗಿ,
ಮೈಯಲ್ಲಾ ಬೆವರಿ ಜೀವಾ ತಾ ಕುಸಿಯತೊಡಗಿತ್ತು.
ಪ್ರೆಮಿಗಳ ಬದುಕು ಇನ್ನೆ೦ತೋ ಎಂದು ದಿಗಿಲುಗೊ೦ಡಿತ್ತು

ನಲಿವ ಮೀನ್ಗಳಿಗೆ ನನ್ನ ದಿಗಿಲಿಲ್ಲ,
ಅಲ್ಲಿ ಹುಟ್ಟಿದ ಪ್ರೀತಿ ಎಂದು ಸಾಯುವುದಿಲ್ಲ...
ನನಗ್ಯಾಕೊ ನನ್ನ ಕರಿಮಿನಿನದೇ ಬಹಳ ಚಿ೦ತೆ
ಕೊಳದ ಮೀನ್ಗಳು ಮರುಗಿದವು ಏನೋ ಅರ್ಥವಾದಂತೆ....

8 comments:

Adithya Biloor said...

Eano Yogi Dhideerane benki kavanagaLanna bareyakke hiduDDe. super IDDu. Nanna kathe hingella Illle. ADu ottu chotuDDa visyana putagatle barDiDDu aste. Title narration ella super Iddu ninDu.

Adithya Biloor said...

marth hogiTThu SaDhya aDre maDhya maDhya prasa break madakkagtha noadu. athavaa prasa tharaDakke noadada. Huttire oLLedu, HuttaDe iDre huttsakke hoagada.

Yogesh Bhat said...

Adithya,
ಹೌದು, ನೀ observe ಮಾಡಿದ್ದು ಸರಿ ಇದ್ದು, ನಂಗೆ ಸರಿಯಾಗಿ ಪ್ರಾಸ ಮಾಡಕ್ಕೆ ಬರದಿಲ್ಲೆ , ಅಷ್ಟೊ೦ದು ಇಷ್ಟನು ಇಲ್ಲೆ. ಪ್ರಾಸ ಮಾಡಕ್ ಹೋದ್ರೆ ಬಾವ ಕೆಟ್ಟು ಹೊಕ್ತು ಅನ್ನೋ ಹೆದ್ರಿಕೆ.

ಮುಂದಿನ ಸಾರಿ ಎರಡರಲ್ಲಿ ಒಂದನ್ನ ಮಾತ್ರ try ಮಾಡ್ತಿ :).

thanks.

ತೇಜಸ್ವಿನಿ ಹೆಗಡೆ said...

ಯೋಗೇಶ್ ಅವರೆ,

ತುಂಬಾ ಅರ್ಥವತ್ತಾದ ಕವನ.. ಮೊದಲ ಹಾಗೂ ಕೊನೆಯ ಚರಣ ತುಂಬಾ ಇಷ್ಟವಾದವು.

Aditya Prasad said...

oh!!.. chanagidhu... :) :)I think
The poem is telling about intercast love.. Isnt it..?
Mast eddu... :)

Yogesh Bhat said...

ಧನ್ಯವಾದಗಳು ಹೆಗಡೆಯವರೇ :)

Adi,
ಹಾ೦, ಇದು intercast love ಬಗ್ಗೇನೆ....
ಕವನದ "ನಾನು"ಗೆ ಮುಂದೆ ಏನಾಗ್ತೋ ಅನ್ನೋ ಭಯ, ಹುಡುಕಿದ್ರೆ ಬೇರೆ ಯಾವ ಜೀವ ಪ್ರಪಂಚದಲ್ಲೂ ಆ ಭಯ ಇಲ್ಲೆ, ಯಾಕೆ ಮನುಷ್ಯರು ಮಾತ್ರ ಹೀಗೆ ಅನ್ನೋ ಕೊರಗು...

thanks for the comment

Shwetha Mallelwar said...

ಅಲ್ಲಿ ಹುಟ್ಟಿದ ಪ್ರೀತಿ ಎಂದು ಸಾಯುವುದಿಲ್ಲ...
ನನಗ್ಯಾಕೊ ನನ್ನ ಕರಿಮಿನಿನದೇ ಬಹಳ ಚಿ೦ತೆ

ಈ ಎರಡು ಸಾಲುಗಳು ನನಗೆ ತುಂಬಾ ಇಷ್ಟವಾಯಿತು :-)
ಕವನ ತುಂಬಾ ಚನಗಿದ್ದೆ.


ನಿಮ್ಮ ನೆಕ್ಸ್ಟ್ ಪೋಸ್ಟ್ ನಿರೀಕ್ಷೆಯಲ್ಲಿ.......

ನಿಮ್ಮ ಅಭಿಮಾನಿ...
ಶ್ವೇತ

Yogesh Bhat said...

Thanks Shwetha:)