Thursday, April 24, 2008

ನಾಕು ಕನಸು

ಮುಂಜಾವೇ ಹಂಗ
ಕನಸು ಮುಗಿದೊಡನೆ ಬೆಚ್ಚೆದ್ದು ಕುಳಿತಿದ್ದೆ ಹಿಂಗ

ಹಸಿರೆಲೆಯ ಮೊಗ್ಗಿನ್ನೂ ಅರಳಿರಲಿಲ್ಲ,
ಮೃದುವಾಗಿ ಎಳೆತಂದು
ಮಡಿಲೊತ್ತಿಕೊಂಡಿದ್ದೆ, ಕಣ್ಬಿಟ್ಟಾಗ
ಮೊಗ್ಗಿರಲಿಲ್ಲ - ಈ ಮುಂಜಾವೇ ಹಂಗ...

ತಿರುಗಿ ಮಲಗಿದರೆ ಮನೆ ತುಂಬಾ ಮೊಗ್ಗಿನದೇ ಕಂಪು
ಗಮಗಮನೆ ಮೂಗೇರಿ ಮನವನಾವರಿಸಿತ್ತು ತಂಪು
ಸ್ವರ್ಗಕ್ಕೆ ಮೂರೇಗೇಣು; ಎಚ್ಚೆತ್ತು ನೋಡಿದರೆ
ಇನಿತು ಕಂಪಿರಲಿಲ್ಲ - ಈ ಮುಂಜಾವೇ ಹಂಗ...

ಮೊಗ್ಗು ಚೆಲುವಾಗಿತ್ತು, ಚೆಲುವರಳಿ ಹೂವಾಗಿತ್ತು,
ಹೂನೋಟ ನಗುವಾಗಿ, ಆ ನಗುವು ಗುಂಗಾಗಿ, ಇಡೀ ದೇಹ
ಹೂವೊಳಗೆ ಹುದುಗಿ ಹೊಗಿತ್ತು. ಹುದುಗಿದ ಕೈಯ
ಹರವಿಗೆ ಹೂವೆ ಸಿಗಲಿಲ್ಲ - ಈ ಮುಂಜಾವೇ ಹಂಗ...

ನನ್ ಜೀವ ಹೂವೇರಿ, ಮನಸು ಮಕರ೦ದವ ಸೇರಿ
ಆ ಸುಖವು ಹಣ್ಣಾಗಿ, ಇಡೀ ಹಣ್ಣು ಸಿಹಿಯಾಗಿ, ಬದುಕು
ಬಯಸಿದ೦ತಾಗುವ ಮೊದಲೇ ವಿದಿ ತಾನೊ೦ದ ಬಗೆದಿತ್ತು.
ಕೈಸಿಗದ ಹೂವು ಮರೆಯಾಗಿ ದೂರ ಸರಿದಿತ್ತು - ಈ ಮುಂಜಾವೇ ಹಂಗ...

10 comments:

Adithya Biloor said...

best of luck for ur new journey.

Aditya Prasad said...

wow!!!! :) :)
chanagiddu... :)
waiting for your next post...

ಶ್ಯಾಮಾ said...

"ಎಚ್ಚೆತ್ತು ನೋಡಿದರೆ
ಇನಿತು ಕಂಪಿರಲಿಲ್ಲ - ಈ ಮುಂಜಾವೇ ಹಂಗ..."
ತುಂಬ ಇಷ್ಟವಾದ ಸಾಲುಗಳು.
ಇಡೀ ಕವಿತೆಯ ಭಾವ ತುಂಬ ಸೊಗಸಾಗಿದ್ದು.

All the best.

Yogesh Bhat said...

Thanks Adithya, Aditya and Shyama.

ನಿಮ್ಮ ಪ್ರೋತ್ಸಾಹಕ್ಕಾಗಿನೆ ಇಲ್ಲಿ ಪೋಸ್ಟ್ ಮಾಡ್ತಾ ಇದ್ದಿ, ಯಾವಾಗ್ಲೂ ಬರ್ತಾ ಇರಿ.

Shwetha Mallelwar said...

Adjectives are less to describe your poem yogesh...ohhh sorry Great poet yogesh.

kavithe Tumba chennagidde kavi Yogeshaware:-)

nimma kanasu nijavagali yendu harayesutheni.:-) huvvu,hannu jote ondu olleya huduginu sigaliyendu...haraysutheni.:-)

Yogesh Bhat said...

Shwetha tumba thanks for both (:-
ಇಲ್ಲಿ ಮುಂಜಾವಿನ ಕನಸು ಹಾಗೂ ಹೂವು ಇವೆರಡನ್ನು ಭ್ರಮೆ ಮತ್ತು ಆಸೆಗೆ ಹೋಲಿಸಲು ಪ್ರಯತ್ನಿಸಿದ್ದೆ. ಹುಡ್ಗಿನೂ ಆಗುತ್ತೆ ಅನ್ನು :)

ಪ್ಲೀಸ್ comments ಮಾಡ್ತಾ ಇರಿ.

-ಖಾಲಿ ಯೋಗೇಶ್ :)

Prasanna said...

Amaizing way of describing the desire within us. Eagerly awaiting ur next post.

Thanks
Prasanna

Yogesh Bhat said...

Prasanna, Thanks for boosting up :)

Unknown said...

Wwaaww...chandiddu, tumba chandiddu.

Yogesh Bhat said...

Thanks Jaagu:)